26/06/2026
ಗೋವರ್ಧನ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ ಭಿಕ್ಷುಕ.. ಪ್ರಾಣ ರಕ್ಷಣೆಗಾಗಿ ನಡೆದ ಘಟನೆ ಊಟಕ್ಕಾಗಿ ಅಲ್ಲ
ಸುಳ್ಳು ಸುದ್ದಿ ಹರಡಿದಷ್ಟು ಬೇಗ ಸತ್ಯ ಹರಡುವುದಿಲ್ಲ ಎನ್ನುವ ವಾಸ್ತವ ಎಲ್ಲರಿಗೂ ಗೊತ್ತಿದೆ.. ಕುಡಿದುಕೊಂಡು ಬಂದ ಭಿಕ್ಷುಕ ಹಾಗೂ ಅವನ ಹೆಂಡತಿ ಮಧ್ಯೆ ಪಾರ್ಕಿಂಗ್ ಜಾಗದಲ್ಲಿ ಜಗಳ ಆಗಿ ಭಿಕ್ಷುಕ ಅವನ ಹೆಂಡತಿಗೆ ಹೊಡೆದಿದ್ದಾನೆ.ಅಷ್ಟರಲ್ಲಿ ಏಕೆ ಹೊಡೆದೆ ಎಂದು ಕೇಳಲು ಹೋದ ಗಾರ್ಡ್ ಗೆ ಅವಾಚ್ಯ ಶಬ್ದ ದಿಂದ ನಿಂದಿಸಿದ್ದಾನೆ. ಮೀಸೆ ತಿರುವಿ ಕಲ್ಲು ಹಿಡಿದು ಹೊಡೆಯಲು ಬಂದಿದ್ದಾನೆ.ಆರಂಭದಲ್ಲಿ ಸೆಕ್ಯೂರಿಟಿ ಗೌರವದಿಂದ ಹೇಳಿದಾಗ ಕೇಳದ ಭಿಕ್ಷುಕ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೂಗಿದರೂ ಬಿಡದೇ ಇದ್ದಾಗ ಅವನ ಪ್ರಾಣ ರಕ್ಷಣೆಗಾಗಿ ನಡೆದ ಘಟನೆಯನ್ನು ತಿರುಚಿ ಗೋವರ್ಧನ ಹೋಟೆಲ್ ಹೆಸರು ಕೆಡಿಸಬೇಕೆಂಬ ದುಷ್ಟ ಮನಸ್ಸುಗಳು ಮಾಡಿದ ಕುತಂತ್ರ ಇದಾಗಿದೆ. ಅಲ್ಲೇ ನಿಂತಿದ್ದ 4/5 ಜನರ ಗುಂಪು ಹೋಟೆಲ್ ಹೆಸರು ಕೇ ಡಿಸಬೇಕೆಂಬ ದುರುದ್ದೇಶದಿಂದ ನೀಡಿದ ಪ್ರೇರಣೆ ಇಂದ ಇದೆಲ್ಲ ಘಟನೆ ನಡೆದ ಬಳಿಕ ಆರಾಮಾಗಿ ನಿಂತಿದ್ದ ಭಿಕ್ಷುಕ ಹೋಟೆಲ್ ಮಾಲೀಕ ಹೋಟೆಲಿಗೆ ಬರುತ್ತಿದ್ದಂತೆ ಪಾರ್ಕಿಂಗ್ನಲ್ಲಿ ಮಲಗಿ ಮಾಡಿದ ಹೈಡ್ರಾಮಾ ಇದಾಗಿದೆ ಇಂತಹ ನೂರಾರು ಭಿಕ್ಷುಕರು ಇಲ್ಲಿ ಉಚಿತ ಊಟ ಮಾಡಿ ಹೋಗಿದ್ದಾರೆ.ಅಲ್ಲದೆ ಪಕ್ಕದಲ್ಲಿ ಅನೇಕ ಹೋಟೆಲ್ ಇದ್ದರೂ ಭಿಕ್ಷುಕರು ಇಲ್ಲಿಗೆ ಬರುತ್ತಾರೆ ಎಂದರೆ ದಿನಾಲು ಇವರು ಉಚಿತ ಊಟ ಕೊಟ್ಟು ರೂಢಿ ಮಾಡಿದ್ದೆ ಕಾರಣ.ಇನ್ನಾದರೂ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಲಿ ಸುಳ್ಳು ಸುದ್ದಿ ಹಬ್ಬಿಸಿ ಒಳ್ಳೆಯ ಹೊಟೇಲ್ ಹೆಸರು ಕೆಡಿಸುವುದನ್ನು ನಿಲ್ಲಿಸಲಿ.